2 ಗಂಟೆಗಳ Live Yoga Nidra Workshop

ರಾತ್ರಿ ಮಲಗಿದರೂ ಮನಸ್ಸು ನಿಲ್ಲುವುದಿಲ್ಲವೇ?

Overthinking, ನಕಾರಾತ್ಮಕ ಯೋಚನೆಗಳು, ಒತ್ತಡ ಮತ್ತು ನಿದ್ರೆಯ ಅಶಾಂತಿಯ ಹಿಂದಿರುವ ಕಾರಣಗಳನ್ನು ಸರಳವಾಗಿ ಅರ್ಥಮಾಡಿಕೊಂಡು, ಮಾರ್ಗದರ್ಶಿತ ಯೋಗನಿದ್ರೆಯ ಮೂಲಕ ದೇಹ–ಮನಸ್ಸಿಗೆ ಆಳವಾದ ವಿಶ್ರಾಂತಿಯನ್ನು ನೇರವಾಗಿ ಅನುಭವಿಸಿ.

ಮುಂದಿನ ಲೈವ್ ಕಾರ್ಯಾಗಾರಕ್ಕೆ ನೋಂದಾಯಿಸಿ

ಪ್ರವೇಶ ಶುಲ್ಕವಿಲ್ಲ · ಮುಂಗಡ ನೋಂದಣಿ ಅಗತ್ಯ

ಮುಂದಿನ ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ನೋಂದಣಿ ಪುಟದಲ್ಲಿ ನೋಡಬಹುದು.

ಎಂ. ಗೋಪಾಲಕೃಷ್ಣ ಭಟ್
30+ ವರ್ಷಗಳು ಅನುಭವ
6000+ ಜನರು ಮಾರ್ಗದರ್ಶನ ಪಡೆದಿದ್ದಾರೆ
ಸಂಪೂರ್ಣ ಕನ್ನಡದಲ್ಲಿ ಸರಳ ಮಾರ್ಗದರ್ಶನ
Zoom ಮೂಲಕ Live ನಿಮ್ಮ ಮನೆಯಲ್ಲೇ ಭಾಗವಹಿಸಿ

ನಿಮ್ಮ ಅನುಭವವನ್ನು ಗುರುತಿಸಿ

ಈ ಅನುಭವಗಳಲ್ಲಿ ಯಾವುದಾದರೂ ನಿಮಗೂ ಇದೆಯೇ?

ರಾತ್ರಿ ಮಲಗಿದರೂ ಯೋಚನೆಗಳು ನಿಲ್ಲದೆ, ನಿದ್ರೆ ಬರಲು ಕಷ್ಟವಾಗುತ್ತಿದೆಯೇ?

ಮಧ್ಯರಾತ್ರಿ ಎಚ್ಚರವಾದ ನಂತರ ಮತ್ತೆ ನಿದ್ರೆ ಬರದೆ ಒದ್ದಾಡುತ್ತೀರಾ?

ನಿದ್ರೆ ಮಾಡಿದರೂ ಬೆಳಿಗ್ಗೆ ತಾಜಾತನ ಮತ್ತು ಉತ್ಸಾಹ ಅನುಭವವಾಗುವುದಿಲ್ಲವೇ?

ಸಣ್ಣ ವಿಷಯಗಳನ್ನೂ ಮತ್ತೆ ಮತ್ತೆ ಯೋಚಿಸಿ, ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಹೆಚ್ಚುತ್ತಿವೆಯೇ?

ಕೆಲಸ, ಕುಟುಂಬ ಮತ್ತು ಜವಾಬ್ದಾರಿಗಳ ಒತ್ತಡದಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತಿಲ್ಲವೇ?

ಬೇಡವೆಂದುಕೊಂಡರೂ ಭಯ, ಅನುಮಾನ ಅಥವಾ ಕೆಟ್ಟದ್ದೇ ಸಂಭವಿಸಬಹುದು ಎನ್ನುವ ನಕಾರಾತ್ಮಕ ಯೋಚನೆಗಳು ಮನಸ್ಸಿಗೆ ಬರುತ್ತಿವೆಯೇ?

ಶಾಂತವಾಗಿರಬೇಕು ಎಂದು ಬಯಸಿದರೂ, ಮನಸ್ಸಿನ ಯೋಚನೆಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇ?

ಇದು ನಿಮ್ಮ ಇಚ್ಛಾಶಕ್ತಿಯ ಕೊರತೆಯಾಗಿರಬೇಕೆಂದಿಲ್ಲ. ದೇಹ ಮತ್ತು ಮನಸ್ಸು ನಿರಂತರ ಎಚ್ಚರಿಕೆ ಅಥವಾ ಒತ್ತಡದ ಸ್ಥಿತಿಯಲ್ಲಿ ಉಳಿದಿರುವುದರಿಂದ, ನಕಾರಾತ್ಮಕ ಯೋಚನೆಗಳು, overthinking ಮತ್ತು ನಿದ್ರೆಯ ಅಶಾಂತಿ ಹೆಚ್ಚಾಗಬಹುದು.

Welcome Video Coming Soon

ನಿಮಗಾಗಿ ಒಂದು ಚಿಕ್ಕ ಸಂದೇಶ

ಈ ಕಾರ್ಯಾಗಾರಕ್ಕೆ ಬರುವ ಮೊದಲು, ನಾನು ನಿಮಗೆ ಹೇಳಬೇಕೆಂದಿರುವ ಒಂದು ವಿಷಯ…

Overthinking ಅಥವಾ ನಿದ್ರೆಯ ಅಶಾಂತಿಯನ್ನು ಕೇವಲ “ಯೋಚಿಸಬೇಡಿ” ಎಂದು ಹೇಳುವುದರಿಂದ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಮೊದಲು ದೇಹ ಮತ್ತು ಮನಸ್ಸು ಏಕೆ ನಿರಂತರ ಎಚ್ಚರಿಕೆಯ ಸ್ಥಿತಿಯಲ್ಲಿ ಉಳಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಈ Live Workshopನಲ್ಲಿ ಅದನ್ನು ಸರಳವಾಗಿ ಅರ್ಥಮಾಡಿಕೊಂಡು, ಮಾರ್ಗದರ್ಶಿತ ಯೋಗನಿದ್ರೆಯ ಮೂಲಕ ಆಳವಾದ ವಿಶ್ರಾಂತಿಯನ್ನು ನೇರವಾಗಿ ಅನುಭವಿಸುವ ಅವಕಾಶ ನಿಮಗೆ ಸಿಗುತ್ತದೆ.

ಮೊದಲು ಕಾರಣವನ್ನು ಅರ್ಥಮಾಡಿಕೊಳ್ಳೋಣ

ಇದು ಕೇವಲ ಹೆಚ್ಚು ಯೋಚಿಸುವ ಅಭ್ಯಾಸವಾಗಿರದೇ ಇರಬಹುದು…

ಕೆಲಸ, ಕುಟುಂಬ, ಜವಾಬ್ದಾರಿಗಳು, ಭಯ, ಚಿಂತೆ ಮತ್ತು ನಿರಂತರ ಒತ್ತಡದಿಂದ ದೇಹ–ಮನಸ್ಸು ಕೆಲವೊಮ್ಮೆ ಸಹಜವಾದ ವಿಶ್ರಾಂತಿಯ ಸ್ಥಿತಿಗೆ ಮರಳಲು ಕಷ್ಟಪಡಬಹುದು.

ದೇಹ ಮತ್ತು ಮನಸ್ಸು ನಿರಂತರ ಎಚ್ಚರಿಕೆಯ ಸ್ಥಿತಿಯಲ್ಲಿ ಉಳಿದಾಗ, ಒಂದೇ ಯೋಚನೆಗಳು ಮತ್ತೆ ಮತ್ತೆ ಬರುವುದು, ನಕಾರಾತ್ಮಕ ಯೋಚನೆಗಳು ಹೆಚ್ಚುವುದು, ಮಲಗುವ ಸಮಯದಲ್ಲೂ ಮನಸ್ಸು ಚುರುಕಾಗಿರುವುದು ಮತ್ತು ನಿದ್ರೆಯ ಗುಣಮಟ್ಟ ಕಡಿಮೆಯಾಗುವುದು ಸಹಜವಾಗಿ ಕಾಣಿಸಬಹುದು.

ಮನಸ್ಸನ್ನು ಬಲವಂತವಾಗಿ ನಿಲ್ಲಿಸಲು ಪ್ರಯತ್ನಿಸುವುದಕ್ಕಿಂತ, ದೇಹ–ಮನಸ್ಸಿಗೆ ಆಳವಾದ ವಿಶ್ರಾಂತಿಯ ಅನುಭವ ನೀಡುವುದು ಹೆಚ್ಚು ಉಪಯುಕ್ತವಾಗಬಹುದು.

ಒತ್ತಡ ಮತ್ತು ಚಿಂತೆ ದಿನನಿತ್ಯದ ಜವಾಬ್ದಾರಿಗಳು ಮತ್ತು ಮಾನಸಿಕ ಒತ್ತಡ
ನಿರಂತರ ಎಚ್ಚರಿಕೆಯ ಸ್ಥಿತಿ ದೇಹ–ಮನಸ್ಸಿಗೆ ಸಂಪೂರ್ಣವಾಗಿ ವಿಶ್ರಾಂತಿ ಸಿಗದಿರುವುದು
Overthinking ಮತ್ತು ನಕಾರಾತ್ಮಕ ಯೋಚನೆಗಳು ಮನಸ್ಸು ಮತ್ತೆ ಮತ್ತೆ ಅದೇ ವಿಷಯಗಳಲ್ಲಿ ತೊಡಗಿಕೊಳ್ಳುವುದು
ನಿದ್ರೆಯ ಅಶಾಂತಿ ನಿದ್ರೆ ಬರಲು ಕಷ್ಟ ಅಥವಾ ನಿದ್ರೆ ಮಧ್ಯೆ ಅಡ್ಡಿಯಾಗುವುದು

ಈ ಕಾರ್ಯಾಗಾರದಲ್ಲಿ ನೀವು ಇದನ್ನು ಕೇವಲ ತಿಳಿದುಕೊಳ್ಳುವುದಲ್ಲ — ನೇರವಾಗಿ ಅನುಭವಿಸುತ್ತೀರಿ.

ಈ ಕಾರ್ಯಾಗಾರದಿಂದ ನೀವು ಪಡೆಯುವುದು

ಈ 2 ಗಂಟೆಗಳ Live Yoga Nidra Workshopನಲ್ಲಿ ನೀವು…

01

ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳಿ

Overthinking, ನಕಾರಾತ್ಮಕ ಯೋಚನೆಗಳು ಮತ್ತು ನಿದ್ರೆಯ ಅಶಾಂತಿ ಏಕೆ ಹೆಚ್ಚಾಗಬಹುದು ಎಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳಿ.

02

ಸರಿಯಾದ ದಿಕ್ಕನ್ನು ತಿಳಿದುಕೊಳ್ಳಿ

ಮನಸ್ಸನ್ನು ಬಲವಂತವಾಗಿ ನಿಲ್ಲಿಸಲು ಪ್ರಯತ್ನಿಸುವುದಕ್ಕಿಂತ, ದೇಹ–ಮನಸ್ಸನ್ನು ಶಾಂತಗೊಳಿಸುವುದು ಏಕೆ ಮುಖ್ಯ ಎಂಬುದನ್ನು ತಿಳಿಯಿರಿ.

03

ಯೋಗನಿದ್ರೆಯನ್ನು ಸರಳವಾಗಿ ತಿಳಿಯಿರಿ

ಯೋಗನಿದ್ರೆ ದೇಹ–ಮನಸ್ಸಿನ ಆಳವಾದ ವಿಶ್ರಾಂತಿ ಮತ್ತು ಮನಶ್ಶಾಂತಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಯಿರಿ.

04

ನೇರವಾಗಿ ಅನುಭವಿಸಿ

ಸರಿಯಾದ ಮಾರ್ಗದರ್ಶನದಲ್ಲಿ Guided Yoga Nidra ಅಭ್ಯಾಸವನ್ನು ಸ್ವತಃ ನೇರವಾಗಿ ಅನುಭವಿಸಿ.

05

ಮುಂದುವರಿಸುವ ದಿಕ್ಕು ಪಡೆಯಿರಿ

ಈ ಅನುಭವವನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಮುಂದುವರಿಸಲು ಸರಳ ಮತ್ತು ಸ್ಪಷ್ಟವಾದ ದಿಕ್ಕನ್ನು ಪಡೆಯಿರಿ.

ಇದು ಕೇವಲ ಮಾಹಿತಿ ನೀಡುವ webinar ಅಲ್ಲ — ನಿಮ್ಮ ದೇಹ ಮತ್ತು ಮನಸ್ಸು ಆಳವಾದ ವಿಶ್ರಾಂತಿಯನ್ನು ಅನುಭವಿಸುವ Live Workshop.

ಕಾರ್ಯಾಗಾರದ ಸರಳ ಕ್ರಮ

ಈ Live Workshop ಮೂರು ಸರಳ ಹಂತಗಳಲ್ಲಿ ನಡೆಯುತ್ತದೆ

01

ಅರ್ಥಮಾಡಿಕೊಳ್ಳಿ

Overthinking, ನಕಾರಾತ್ಮಕ ಯೋಚನೆಗಳು ಮತ್ತು ನಿದ್ರೆಯ ಅಶಾಂತಿಯ ಹಿಂದಿರುವ ಕಾರಣಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳಿ.

02

ನೇರವಾಗಿ ಅನುಭವಿಸಿ

ಮಾರ್ಗದರ್ಶಿತ Yoga Nidra ಅಭ್ಯಾಸದ ಮೂಲಕ ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿಯ ಅನುಭವವನ್ನು ನೇರವಾಗಿ ಪಡೆಯಿರಿ.

03

ಮುಂದುವರಿಸುವ ದಿಕ್ಕು ಪಡೆಯಿರಿ

ಯೋಗನಿದ್ರೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವ ಮಹತ್ವವನ್ನು ತಿಳಿದುಕೊಂಡು, ಇನ್ನಷ್ಟು ಬದ್ಧತೆಯಿಂದ ಮುಂದುವರಿಸಲು ಬಯಸುವವರಿಗೆ 21 ದಿನಗಳ ಮಾರ್ಗದರ್ಶಿತ ಯೋಗನಿದ್ರಾ ಅಭ್ಯಾಸದ ಬಗ್ಗೆ ಮಾಹಿತಿ ಪಡೆಯಿರಿ.

ಮೊದಲು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಿ. ನಂತರ ವಿಶ್ರಾಂತಿಯನ್ನು ನೇರವಾಗಿ ಅನುಭವಿಸಿ. ಆಮೇಲೆ ಅದನ್ನು ನಿಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳುವ ದಿಕ್ಕನ್ನು ಕಂಡುಕೊಳ್ಳಿ.

ನೈಜ ಅನುಭವಗಳು

ಯೋಗನಿದ್ರೆಯನ್ನು ಅನುಭವಿಸಿದವರ ಮಾತುಗಳಲ್ಲಿ…

ನಿದ್ರೆ, overthinking ಮತ್ತು ಮನಸ್ಸಿನ ಅಶಾಂತಿಯಿಂದ ಹೊರಬರಲು ಪ್ರಯತ್ನಿಸಿದ ನಮ್ಮ ಸಾಧಕರ ಕೆಲವು ನೈಜ ಅನುಭವಗಳು.

ಪ್ರದೀಪ್

ಮಧ್ಯರಾತ್ರಿ ಎಚ್ಚರವಾದ ನಂತರ ಮತ್ತೆ ನಿದ್ರೆ ಬಾರದ ತೊಂದರೆಯಿಂದ, ಸುಲಭವಾಗಿ ಮತ್ತೆ ನಿದ್ರೆಗೆ ಜಾರುವ ಅನುಭವದ ಕಡೆಗೆ

“ಮೊದಲು ರಾತ್ರಿ ಮೂರು ಗಂಟೆ ಸುಮಾರಿಗೆ ಎಚ್ಚರವಾದರೆ, ಮತ್ತೆ ನಿದ್ರೆ ಬರುತ್ತಿರಲಿಲ್ಲ. ಈಗ ಯೋಗನಿದ್ರೆಯನ್ನು ನಿಯಮಿತವಾಗಿ ಮಾಡುತ್ತಿರುವುದರಿಂದ, ಎಚ್ಚರವಾದರೂ ಮತ್ತೆ ಆಟೋಮ್ಯಾಟಿಕ್ ಆಗಿ ನಿದ್ರೆ ಬಂದುಬಿಡುತ್ತದೆ.”

ರಂಜಿತಾ N.H.

ಎಂಟು ತಿಂಗಳಿಂದ ಕಾಡುತ್ತಿದ್ದ ಆತಂಕ ಮತ್ತು ನಿರಂತರ ನಕಾರಾತ್ಮಕ ಯೋಚನೆಗಳಿಂದ ನೆಮ್ಮದಿಯ ಕಡೆಗೆ

“ಯಾವಾಗಲೂ ಯೋಚನೆಗಳಲ್ಲೇ ಮುಳುಗಿದ್ದೆ. ಈಗ ಆತಂಕ ಬಹಳಷ್ಟು ಕಡಿಮೆಯಾಗಿದೆ. ನಕಾರಾತ್ಮಕ ಯೋಚನೆಗಳು ಕಡಿಮೆಯಾಗಿ, ಸಂಕಲ್ಪಾಭ್ಯಾಸದಿಂದ ಸಕಾರಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ.”

ಗಾಯತ್ರಿ

ಭಯ ಮತ್ತು ಸಂಕುಚಿತ ಭಾವನೆಯಿಂದ ಮತ್ತೆ ಧೈರ್ಯ ಮತ್ತು ಚುರುಕುತನದ ಕಡೆಗೆ

“ಕೆಲವು ತಿಂಗಳುಗಳಿಂದ ಕಾರ್ ಡ್ರೈವಿಂಗ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೆ. ಪರಿವಾರಕ್ಕೆ ಸೇರಿದ ಮೇಲೆ ಮತ್ತೆ ಡ್ರೈವಿಂಗ್ ಮಾಡ್ತಾ ಇದ್ದೇನೆ. ಈಗ ಮಾನಸಿಕವಾಗಿಯೂ ದೈಹಿಕವಾಗಿಯೂ ಹೆಚ್ಚು ಆಕ್ಟಿವ್ ಆಗಿದ್ದೇನೆ.”

ಇನ್ನಷ್ಟು ನೈಜ ಅನುಭವಗಳು

ನಿಯಮಿತ ಅಭ್ಯಾಸದಿಂದ ಕಂಡ ಬದಲಾವಣೆಗಳು

ಮಾಲಿನಿ ಎಸ್.ಎಂ.

ಮಾಲಿನಿ ಎಸ್.ಎಂ.

ಚಿಕ್ಕಮಗಳೂರು

“ಗಂಟೆಗೆ ಒಮ್ಮೆ ಎಚ್ಚರವಾಗುತ್ತಿದ್ದ ನಾನು, ಈಗ ಮಲಗಿದ ತಕ್ಷಣ ನಿದ್ರೆಗೆ ಜಾರುತ್ತೇನೆ.”

ಸುಧಾ ಪ್ರಕಾಶ್

ಸುಧಾ ಪ್ರಕಾಶ್

Coimbatore

“ಮೊದಲು ಸಣ್ಣ ಶಬ್ದಕ್ಕೂ ಎಚ್ಚರವಾಗುತ್ತಿದ್ದ ನಾನು, ನಂತರ ಗಾಢವಾಗಿ ನಿದ್ರೆ ಮಾಡತೊಡಗಿದೆ.”

ಡಾ. ಪಿ.ಬಿ. ಬಾಗೇವಾಡಿ

ಡಾ. ಪಿ.ಬಿ. ಬಾಗೇವಾಡಿ

ಜಮಖಂಡಿ

“ಜೀವನವೇ ಮುಗಿದುಹೋಯಿತೇನೋ ಎಂಬ ಭಾವನೆಯಿಂದ, ಮತ್ತೆ ಬದುಕಿನ ಮೇಲೆ ನಂಬಿಕೆ ಬಂದಿತು.”

ಜಯಲಕ್ಷ್ಮಿ ಭಟ್

ಜಯಲಕ್ಷ್ಮಿ ಭಟ್

ಮುರುಡೇಶ್ವರ

“ಮೊದಲು ಸಣ್ಣ ವಿಷಯಕ್ಕೂ ಅಳುತ್ತಿದ್ದ ನಾನು, ಈಗ ಒಳಗಿನಿಂದ ಹೆಚ್ಚು ಬಲವಾಗಿದ್ದೇನೆ.”

ರವಿ ಚಿಕ್ಕಯ್ಯ

ರವಿ ಚಿಕ್ಕಯ್ಯ

ಬೆಂಗಳೂರು

“ಸಭೆಗಳಲ್ಲಿ ಮಾತನಾಡಲು ಹೆದರುತ್ತಿದ್ದ ನಾನು, ಈಗ ಜನರೊಂದಿಗೆ ಹೆಚ್ಚು ಮುಕ್ತವಾಗಿ ಬೆರೆಯುತ್ತಿದ್ದೇನೆ.”

ಈ ಅನುಭವಗಳಲ್ಲಿ ಸಾಮಾನ್ಯವಾಗಿ ಕಾಣುವ ಒಂದು ಸಂಗತಿ — ಬದಲಾವಣೆ ಕೇವಲ ತಿಳಿದುಕೊಳ್ಳುವುದರಿಂದ ಅಲ್ಲ, ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಗಾಢವಾಗುತ್ತದೆ.

ನಿಮಗೂ ಈ ಅನುಭವ ಬೇಕೆ?

ನಿಮ್ಮ ಮನಸ್ಸಿಗೆ ಸ್ವಲ್ಪ ಸಮಯ ಮೀಸಲಿಟ್ಟು, ಯೋಗನಿದ್ರೆಯನ್ನು ನೇರವಾಗಿ ಅನುಭವಿಸಿ

ಮುಂದಿನ ಲೈವ್ ಕಾರ್ಯಾಗಾರಕ್ಕೆ ನೋಂದಾಯಿಸಿ

ಪ್ರವೇಶ ಶುಲ್ಕವಿಲ್ಲ · ಮುಂಗಡ ನೋಂದಣಿ ಅಗತ್ಯ

ಈ ಕಾರ್ಯಾಗಾರ ನಿಮಗೆ ಸೂಕ್ತವೇ?

ಈ Live Yoga Nidra Workshop ನಿಮಗಾಗಿ — ನಿಮ್ಮಲ್ಲಿ…

ರಾತ್ರಿ ಮಲಗಿದರೂ ಮನಸ್ಸಿನ ಯೋಚನೆಗಳು ನಿಲ್ಲದೆ ನಿದ್ರೆ ಬರಲು ಕಷ್ಟವಾಗುತ್ತಿದ್ದರೆ

ಮಧ್ಯರಾತ್ರಿ ಎಚ್ಚರವಾದ ನಂತರ ಮತ್ತೆ ನಿದ್ರೆಗೆ ಜಾರಲು ಕಷ್ಟವಾಗುತ್ತಿದ್ದರೆ

ಭಯ, ಚಿಂತೆ, ಅನುಮಾನ ಅಥವಾ ನಕಾರಾತ್ಮಕ ಯೋಚನೆಗಳು ಮತ್ತೆ ಮತ್ತೆ ಬರುತ್ತಿದ್ದರೆ

ಕೆಲಸ, ಕುಟುಂಬ ಮತ್ತು ಜವಾಬ್ದಾರಿಗಳ ಒತ್ತಡದಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತಿಲ್ಲವೆನಿಸಿದರೆ

ನಿದ್ರೆ ಮಾಡಿದರೂ ಬೆಳಿಗ್ಗೆ ತಾಜಾತನ ಮತ್ತು ಉತ್ಸಾಹ ಅನುಭವವಾಗುತ್ತಿಲ್ಲವೆನಿಸಿದರೆ

ಯೋಗನಿದ್ರೆಯನ್ನು ಸರಿಯಾದ ಮಾರ್ಗದರ್ಶನದಲ್ಲಿ ನೇರವಾಗಿ ಅನುಭವಿಸಲು ಬಯಸುತ್ತಿದ್ದರೆ

ಈ ಕಾರ್ಯಾಗಾರದಿಂದ ಹೆಚ್ಚಿನ ಪ್ರಯೋಜನ ಪಡೆಯಲು, ಸುಮಾರು ಎರಡು ಗಂಟೆಗಳ ಕಾಲ ಅಡ್ಡಿಯಿಲ್ಲದೆ ಭಾಗವಹಿಸಿ, ಮಾರ್ಗದರ್ಶಿತ ಯೋಗನಿದ್ರೆಯನ್ನು ಪೂರ್ಣವಾಗಿ ಅನುಭವಿಸುವ ಮನಸ್ಸಿರಬೇಕು.

ಧ್ಯಾನ ಅಥವಾ ಯೋಗನಿದ್ರೆಯ ಹಿಂದಿನ ಅನುಭವ ಅಗತ್ಯವಿಲ್ಲ. ಮೊದಲ ಬಾರಿಗೆ ಅಭ್ಯಾಸ ಮಾಡುತ್ತಿರುವವರೂ ಸುಲಭವಾಗಿ ಭಾಗವಹಿಸಬಹುದು.

ಒಂದು ಮುಖ್ಯ ವಿಷಯ

ಈ ಕಾರ್ಯಾಗಾರ ನಿಮಗೆ ಸೂಕ್ತವಾಗದಿರಬಹುದು — ನೀವು…

×

ಬೇರೆ ಕೆಲಸಗಳನ್ನು ಮಾಡುತ್ತಾ backgroundನಲ್ಲಿ workshop ಕೇಳಲು ಬಯಸುತ್ತಿದ್ದರೆ

×

ಸುಮಾರು ಎರಡು ಗಂಟೆಗಳ ಕಾಲ ಗಮನವಿಟ್ಟು ಭಾಗವಹಿಸಲು ಸಾಧ್ಯವಿಲ್ಲದಿದ್ದರೆ

×

ಕೇವಲ ಮಾಹಿತಿ ಕೇಳಲು ಬಯಸಿ, ಮಾರ್ಗದರ್ಶಿತ ಯೋಗನಿದ್ರೆಯನ್ನು ಸ್ವತಃ ಅನುಭವಿಸಲು ಆಸಕ್ತಿ ಇಲ್ಲದಿದ್ದರೆ

×

ಯಾವುದೇ ನಿಯಮಿತ ಅಭ್ಯಾಸವಿಲ್ಲದೆ ತಕ್ಷಣದ ಅಥವಾ ಅದ್ಭುತ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದರೆ

×

ನಿಮ್ಮದೇ ಒಳಿತಿಗಾಗಿ ಸ್ವಲ್ಪ ಸಮಯ ಮತ್ತು ಗಮನವನ್ನು ಮೀಸಲಿಡಲು ಸಿದ್ಧವಿಲ್ಲದಿದ್ದರೆ

ಯೋಗನಿದ್ರೆ ಒಂದು ಅನುಭವಾಧಾರಿತ ಅಭ್ಯಾಸ. ಅದನ್ನು ಕೇವಲ ಕೇಳುವುದಕ್ಕಿಂತ, ಸರಿಯಾದ ಮಾರ್ಗದರ್ಶನದಲ್ಲಿ ಸ್ವತಃ ಅನುಭವಿಸಿದಾಗ ಅದರ ಮೌಲ್ಯ ಹೆಚ್ಚು ಸ್ಪಷ್ಟವಾಗುತ್ತದೆ.

ಎರಡು ಗಂಟೆಗಳ ಕಾಲ ನಿಮಗಾಗಿ ಮೀಸಲಿಟ್ಟು, ಶಾಂತವಾಗಿ ಮತ್ತು ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಿದ್ದರೆ — ಈ ಕಾರ್ಯಾಗಾರ ನಿಮಗೆ ಹೆಚ್ಚು ಉಪಯುಕ್ತವಾಗಬಹುದು.

ಎಂ. ಗೋಪಾಲಕೃಷ್ಣ ಭಟ್ — ಯೋಗನಿದ್ರಾ ಮಾರ್ಗದರ್ಶಕರು ಮತ್ತು ಲೇಖಕರು

ನಿಮ್ಮ ಮಾರ್ಗದರ್ಶಕರು

ಎಂ. ಗೋಪಾಲಕೃಷ್ಣ ಭಟ್

Stress & Mind Expert · Life Transformation Guide

ಬಾಲ್ಯದಿಂದಲೇ ಧ್ಯಾನ ಮತ್ತು ಆಂತರಿಕ ಬೆಳವಣಿಗೆಯ ಬಗ್ಗೆ ಆಸಕ್ತಿ ಹೊಂದಿರುವ ಗೋಪಾಲಕೃಷ್ಣ ಭಟ್ ಅವರು 13ನೇ ವಯಸ್ಸಿನಿಂದ ಧ್ಯಾನಾಭ್ಯಾಸ ಮಾಡುತ್ತಿದ್ದಾರೆ. 1996ರಿಂದ Siddha Samadhi Yoga ಶಿಕ್ಷಕರಾಗಿ ಜನರಿಗೆ ಧ್ಯಾನ, ಯೋಗನಿದ್ರೆ ಮತ್ತು ಜೀವನ ಪರಿವರ್ತನೆಯ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಂಸ್ಕೃತದಲ್ಲಿ M.A. ಹಾಗೂ Psychological Counsellingನಲ್ಲಿ PG Diploma ಪಡೆದಿರುವ ಅವರು, ಮಾನಸಿಕ ಪುನರ್ವಸತಿ ಕ್ಷೇತ್ರದಲ್ಲಿಯೂ ಸುಮಾರು 18 ವರ್ಷಗಳ ಅನುಭವ ಹೊಂದಿದ್ದಾರೆ.

Sarvasamriddhi Yoganidra Parivara ಮೂಲಕ ಯೋಗನಿದ್ರೆಯನ್ನು ಸರಳವಾಗಿ ಅರ್ಥಮಾಡಿಕೊಂಡು ನಿಯಮಿತವಾಗಿ ಅಭ್ಯಾಸ ಮಾಡಲು ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಈ 2 ಗಂಟೆಗಳ Live Workshop ಮೊದಲ ಅನುಭವ ಮತ್ತು ಸರಿಯಾದ ದಿಕ್ಕನ್ನು ನೀಡುತ್ತದೆ. ಇನ್ನಷ್ಟು ನಿಯಮಿತವಾಗಿ ಮತ್ತು ಬದ್ಧತೆಯಿಂದ ಅಭ್ಯಾಸ ಮಾಡಲು ಬಯಸುವವರಿಗೆ 21 ದಿನಗಳ ಮಾರ್ಗದರ್ಶಿತ ಯೋಗನಿದ್ರಾ ಅಭ್ಯಾಸದ ಅವಕಾಶವೂ ಪ್ರತ್ಯೇಕವಾಗಿ ಲಭ್ಯವಿರುತ್ತದೆ.

“ಗಾಢ ನಿದ್ರೆ ಮತ್ತು ನೆಮ್ಮದಿಗಾಗಿ ಯೋಗನಿದ್ರೆ” ಪುಸ್ತಕದ ಲೇಖಕರು.

“ಮನಸ್ಸನ್ನು ಬಲವಂತವಾಗಿ ನಿಲ್ಲಿಸುವುದು ನಮ್ಮ ಉದ್ದೇಶವಲ್ಲ. ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿಯ ಅನುಭವ ನೀಡಿದಾಗ, ಶಾಂತಿ ಸಹಜವಾಗಿ ಮೂಡಲು ಆರಂಭಿಸುತ್ತದೆ.”
ಮನಶ್ಶಾಂತಿಗಾಗಿ ಯೋಗನಿದ್ರಾ ಮಾರ್ಗದರ್ಶಿ

ಕಾರ್ಯಾಗಾರದೊಂದಿಗೆ ವಿಶೇಷ ಸಂಪನ್ಮೂಲ

ಕಾರ್ಯಾಗಾರದ ನಂತರವೂ ನಿಮ್ಮೊಂದಿಗೆ ಉಳಿಯುವ ವಿಶೇಷ ಕನ್ನಡ PDF ಮಾರ್ಗದರ್ಶಿ

Live Workshopನಲ್ಲಿ ತಿಳಿದುಕೊಂಡ ವಿಷಯಗಳನ್ನು ನಂತರವೂ ನೆನಪಿಸಿಕೊಂಡು, ಯೋಗನಿದ್ರೆಯ ಅಭ್ಯಾಸವನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಲು ಸಹಾಯವಾಗುವ ಸರಳ ಕನ್ನಡ ಮಾರ್ಗದರ್ಶಿ.

  • ಯೋಗನಿದ್ರೆಯ ಮೂಲಭೂತ ಅರ್ಥ ಮತ್ತು ಅಭ್ಯಾಸದ ದಿಕ್ಕು
  • ಒತ್ತಡ, ನಕಾರಾತ್ಮಕ ಯೋಚನೆಗಳು ಮತ್ತು ನಿದ್ರೆಯ ಬಗ್ಗೆ ಸರಳ ಅರಿವು
  • ನಿಯಮಿತ ಅಭ್ಯಾಸದ ಮಹತ್ವ ಮತ್ತು 21 ದಿನಗಳ ಅಭ್ಯಾಸದ ದೃಷ್ಟಿಕೋನ
  • ಯೋಗನಿದ್ರೆಯನ್ನು ಅನುಭವಿಸಿದವರ ಕೆಲವು ನೈಜ ಅನುಭವಗಳು
Live ಕಾರ್ಯಾಗಾರದಲ್ಲಿ ಪೂರ್ಣವಾಗಿ ಭಾಗವಹಿಸುವವರಿಗೆ ಲಭ್ಯ.

ಸಾಮಾನ್ಯ ಪ್ರಶ್ನೆಗಳು

ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು

ಯೋಗನಿದ್ರೆ ಎಂದರೇನು?

ಯೋಗನಿದ್ರೆ ಎಂದರೆ ಮಲಗುವುದಷ್ಟೇ ಅಲ್ಲ. ಸರಿಯಾದ ಮಾರ್ಗದರ್ಶನದಲ್ಲಿ ದೇಹ ಮತ್ತು ಮನಸ್ಸನ್ನು ಆಳವಾದ ವಿಶ್ರಾಂತಿಯ ಸ್ಥಿತಿಯತ್ತ ಕರೆದೊಯ್ಯುವ ಅನುಭವಾಧಾರಿತ ಅಭ್ಯಾಸ.

ಧ್ಯಾನ ಅಥವಾ ಯೋಗದ ಹಿಂದಿನ ಅನುಭವ ಅಗತ್ಯವಿದೆಯೇ?

ಇಲ್ಲ. ಮೊದಲ ಬಾರಿಗೆ ಯೋಗನಿದ್ರೆಯನ್ನು ಅನುಭವಿಸುತ್ತಿರುವವರೂ ಈ Live Workshopನಲ್ಲಿ ಸುಲಭವಾಗಿ ಭಾಗವಹಿಸಬಹುದು.

ಕಾರ್ಯಾಗಾರ ಎಷ್ಟು ಸಮಯ ನಡೆಯುತ್ತದೆ?

ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತದೆ. ಹೆಚ್ಚಿನ ಪ್ರಯೋಜನಕ್ಕಾಗಿ ಪೂರ್ಣ ಸಮಯ ಅಡ್ಡಿಯಿಲ್ಲದೆ ಭಾಗವಹಿಸುವುದು ಉತ್ತಮ.

ಕಾರ್ಯಾಗಾರದಲ್ಲಿ ಹೇಗೆ ಭಾಗವಹಿಸಬೇಕು?

Workshop Zoom ಮೂಲಕ Live ಆಗಿ ನಡೆಯುತ್ತದೆ. ಶಾಂತವಾದ ಸ್ಥಳ, smartphone ಅಥವಾ computer ಮತ್ತು ಸ್ಥಿರವಾದ internet connection ಇದ್ದರೆ ಸಾಕು.

Overthinking, ನಕಾರಾತ್ಮಕ ಯೋಚನೆಗಳು ಮತ್ತು ನಿದ್ರೆಯ ಅಶಾಂತಿ ಇರುವವರಿಗೆ ಇದು ಉಪಯುಕ್ತವೇ?

ಈ workshop ವಿಶೇಷವಾಗಿ ಇಂತಹ ಅನುಭವಗಳ ಹಿಂದಿರುವ ಕಾರಣಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಮಾರ್ಗದರ್ಶಿತ ಯೋಗನಿದ್ರೆಯ ಮೂಲಕ ಆಳವಾದ ವಿಶ್ರಾಂತಿಯನ್ನು ನೇರವಾಗಿ ಅನುಭವಿಸಲು ರೂಪಿಸಲಾಗಿದೆ.

ಇದು lecture ಅಥವಾ webinar ಮಾತ್ರವೇ?

ಇಲ್ಲ. ಮಾಹಿತಿ ಮತ್ತು ಅರ್ಥಮಾಡಿಕೊಳ್ಳುವ ಭಾಗದ ಜೊತೆಗೆ, ನೀವು Guided Yoga Nidra ಅಭ್ಯಾಸವನ್ನು ನೇರವಾಗಿ ಅನುಭವಿಸುತ್ತೀರಿ.

ಮುಂದಿನ workshop ಯಾವಾಗ?

ಮುಂದಿನ ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ನೋಂದಣಿ ಪುಟದಲ್ಲಿ ನೋಡಬಹುದು.

ಕಾರ್ಯಾಗಾರಕ್ಕೆ ಶುಲ್ಕವಿದೆಯೇ?

ಪ್ರವೇಶ ಶುಲ್ಕವಿಲ್ಲ. ಆದರೆ ಮುಂಗಡ ನೋಂದಣಿ ಅಗತ್ಯ.

ಈ Live Workshop ನಂತರ ಇನ್ನೊಂದು ಕಾರ್ಯಕ್ರಮಕ್ಕೆ ಸೇರಿಕೊಳ್ಳಬೇಕೇ?

ಇಲ್ಲ. ಈ 2 ಗಂಟೆಗಳ Live Workshop ನಂತರ ಯಾವುದೇ ಇನ್ನೊಂದು ಕಾರ್ಯಕ್ರಮಕ್ಕೆ ಸೇರುವುದು ಕಡ್ಡಾಯವಲ್ಲ.

ಯೋಗನಿದ್ರೆಯನ್ನು ಇನ್ನಷ್ಟು ನಿಯಮಿತವಾಗಿ ಮತ್ತು ಬದ್ಧತೆಯಿಂದ ಅಭ್ಯಾಸ ಮಾಡಲು ಬಯಸುವವರಿಗೆ, workshop ಕೊನೆಯಲ್ಲಿ 21 ದಿನಗಳ ಮಾರ್ಗದರ್ಶಿತ ಯೋಗನಿದ್ರಾ ಅಭ್ಯಾಸದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದರಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಐಚ್ಛಿಕ.

ಇದು ನಿಮ್ಮಿಗಾಗಿ ಮೀಸಲಿಡುವ ಎರಡು ಗಂಟೆಗಳು

ನಿಮ್ಮ ಮನಸ್ಸಿಗೆ ವಿಶ್ರಾಂತಿ ಬೇಕೆಂದು ತಿಳಿದಿದ್ದರೂ, ಅದನ್ನು ಮುಂದೂಡುತ್ತಲೇ ಇದ್ದೀರಾ?

Overthinking, ನಕಾರಾತ್ಮಕ ಯೋಚನೆಗಳು ಮತ್ತು ನಿದ್ರೆಯ ಅಶಾಂತಿಯ ಹಿಂದಿರುವ ಕಾರಣಗಳನ್ನು ಅರ್ಥಮಾಡಿಕೊಂಡು, ಮಾರ್ಗದರ್ಶಿತ ಯೋಗನಿದ್ರೆಯ ಮೂಲಕ ಆಳವಾದ ವಿಶ್ರಾಂತಿಯನ್ನು ನೇರವಾಗಿ ಅನುಭವಿಸಿ.

ಮುಂದಿನ ಲೈವ್ ಕಾರ್ಯಾಗಾರಕ್ಕೆ ನೋಂದಾಯಿಸಿ

ಪ್ರವೇಶ ಶುಲ್ಕವಿಲ್ಲ · ಮುಂಗಡ ನೋಂದಣಿ ಅಗತ್ಯ

ಮುಂದಿನ ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ನೋಂದಣಿ ಪುಟದಲ್ಲಿ ನೋಡಬಹುದು.