2 ಗಂಟೆಗಳ Live Yoga Nidra Workshop
ರಾತ್ರಿ ಮಲಗಿದರೂ ಮನಸ್ಸು ನಿಲ್ಲುವುದಿಲ್ಲವೇ?
Overthinking, ನಕಾರಾತ್ಮಕ ಯೋಚನೆಗಳು, ಒತ್ತಡ ಮತ್ತು ನಿದ್ರೆಯ ಅಶಾಂತಿಯ ಹಿಂದಿರುವ ಕಾರಣಗಳನ್ನು ಸರಳವಾಗಿ ಅರ್ಥಮಾಡಿಕೊಂಡು, ಮಾರ್ಗದರ್ಶಿತ ಯೋಗನಿದ್ರೆಯ ಮೂಲಕ ದೇಹ–ಮನಸ್ಸಿಗೆ ಆಳವಾದ ವಿಶ್ರಾಂತಿಯನ್ನು ನೇರವಾಗಿ ಅನುಭವಿಸಿ.
ಮುಂದಿನ ಲೈವ್ ಕಾರ್ಯಾಗಾರಕ್ಕೆ ನೋಂದಾಯಿಸಿಪ್ರವೇಶ ಶುಲ್ಕವಿಲ್ಲ · ಮುಂಗಡ ನೋಂದಣಿ ಅಗತ್ಯ
ಮುಂದಿನ ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ನೋಂದಣಿ ಪುಟದಲ್ಲಿ ನೋಡಬಹುದು.
ನಿಮ್ಮ ಅನುಭವವನ್ನು ಗುರುತಿಸಿ
ಈ ಅನುಭವಗಳಲ್ಲಿ ಯಾವುದಾದರೂ ನಿಮಗೂ ಇದೆಯೇ?
ರಾತ್ರಿ ಮಲಗಿದರೂ ಯೋಚನೆಗಳು ನಿಲ್ಲದೆ, ನಿದ್ರೆ ಬರಲು ಕಷ್ಟವಾಗುತ್ತಿದೆಯೇ?
ಮಧ್ಯರಾತ್ರಿ ಎಚ್ಚರವಾದ ನಂತರ ಮತ್ತೆ ನಿದ್ರೆ ಬರದೆ ಒದ್ದಾಡುತ್ತೀರಾ?
ನಿದ್ರೆ ಮಾಡಿದರೂ ಬೆಳಿಗ್ಗೆ ತಾಜಾತನ ಮತ್ತು ಉತ್ಸಾಹ ಅನುಭವವಾಗುವುದಿಲ್ಲವೇ?
ಸಣ್ಣ ವಿಷಯಗಳನ್ನೂ ಮತ್ತೆ ಮತ್ತೆ ಯೋಚಿಸಿ, ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಹೆಚ್ಚುತ್ತಿವೆಯೇ?
ಕೆಲಸ, ಕುಟುಂಬ ಮತ್ತು ಜವಾಬ್ದಾರಿಗಳ ಒತ್ತಡದಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತಿಲ್ಲವೇ?
ಬೇಡವೆಂದುಕೊಂಡರೂ ಭಯ, ಅನುಮಾನ ಅಥವಾ ಕೆಟ್ಟದ್ದೇ ಸಂಭವಿಸಬಹುದು ಎನ್ನುವ ನಕಾರಾತ್ಮಕ ಯೋಚನೆಗಳು ಮನಸ್ಸಿಗೆ ಬರುತ್ತಿವೆಯೇ?
ಶಾಂತವಾಗಿರಬೇಕು ಎಂದು ಬಯಸಿದರೂ, ಮನಸ್ಸಿನ ಯೋಚನೆಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇ?
ಇದು ನಿಮ್ಮ ಇಚ್ಛಾಶಕ್ತಿಯ ಕೊರತೆಯಾಗಿರಬೇಕೆಂದಿಲ್ಲ. ದೇಹ ಮತ್ತು ಮನಸ್ಸು ನಿರಂತರ ಎಚ್ಚರಿಕೆ ಅಥವಾ ಒತ್ತಡದ ಸ್ಥಿತಿಯಲ್ಲಿ ಉಳಿದಿರುವುದರಿಂದ, ನಕಾರಾತ್ಮಕ ಯೋಚನೆಗಳು, overthinking ಮತ್ತು ನಿದ್ರೆಯ ಅಶಾಂತಿ ಹೆಚ್ಚಾಗಬಹುದು.
Welcome Video Coming Soon
ನಿಮಗಾಗಿ ಒಂದು ಚಿಕ್ಕ ಸಂದೇಶ
ಈ ಕಾರ್ಯಾಗಾರಕ್ಕೆ ಬರುವ ಮೊದಲು, ನಾನು ನಿಮಗೆ ಹೇಳಬೇಕೆಂದಿರುವ ಒಂದು ವಿಷಯ…
Overthinking ಅಥವಾ ನಿದ್ರೆಯ ಅಶಾಂತಿಯನ್ನು ಕೇವಲ “ಯೋಚಿಸಬೇಡಿ” ಎಂದು ಹೇಳುವುದರಿಂದ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಮೊದಲು ದೇಹ ಮತ್ತು ಮನಸ್ಸು ಏಕೆ ನಿರಂತರ ಎಚ್ಚರಿಕೆಯ ಸ್ಥಿತಿಯಲ್ಲಿ ಉಳಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಈ Live Workshopನಲ್ಲಿ ಅದನ್ನು ಸರಳವಾಗಿ ಅರ್ಥಮಾಡಿಕೊಂಡು, ಮಾರ್ಗದರ್ಶಿತ ಯೋಗನಿದ್ರೆಯ ಮೂಲಕ ಆಳವಾದ ವಿಶ್ರಾಂತಿಯನ್ನು ನೇರವಾಗಿ ಅನುಭವಿಸುವ ಅವಕಾಶ ನಿಮಗೆ ಸಿಗುತ್ತದೆ.